ರೈತರಿಗೆ ರಬ್ಬರ್ ನೆಲಹಾಸು ವಿತರಣೆ-ರೈತರ ಹಿತರಕ್ಷಣೆಗೆ ಬದ್ಧ ಎಂದ ಭೀಮಣ್ಣ

0
1001108512

ಸಿದ್ದಾಪುರ: ತಾಲೂಕಿನ ರೈತರ ಮತ್ತು ಜಾನುವಾರುಗಳ ಹಿತರಕ್ಷಣೆಗಾಗಿ ಸರ್ಕಾರ ಬದ್ಧವಾಗಿದೆ ಎಂದು ಮಾನ್ಯ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ ಅವರು ಹೇಳಿದರು.

ಇಂದು ಸಿದ್ದಾಪುರದ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯವಲಯ ಯೋಜನೆಯಡಿ, ಅರ್ಹ ರೈತ ಫಲಾನುಭವಿಗಳಿಗೆ ರಬ್ಬರ್ ನೆಲಹಾಸು (Rubber Mats) ವಿತರಿಸಿ ಅವರು ಮಾತನಾಡಿದರು.

ದನಕರುಗಳ ಆರೋಗ್ಯ ರಕ್ಷಣೆ ಮತ್ತು ಹಟ್ಟಿಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ರಬ್ಬರ್ ನೆಲಹಾಸುಗಳು ಅತ್ಯಂತ ಉಪಯುಕ್ತವಾಗಿವೆ. ರೈತರು ಇಂತಹ ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಿನ ಹಲವಾರು ರೈತ ಫಲಾನುಭವಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *