ಆಧಾರ ತಿದ್ದುಪಡಿ ಮೇಳ ಯಶಸ್ವಿ

0
WhatsApp Image 2026-07-18 at 20.17.22

ಸಿದ್ದಾಪುರ: ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಮತ್ತು ಭಾರತೀಯ ಅಂಚೆ ಇಲಾಖೆ ಶಿರಸಿ ವಿಭಾಗ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಧಾರ ತಿದ್ದುಪಡಿ ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಜು.17ರ ಶುಕ್ರವಾರ ಮತ್ತು ಜು.18ರ ಶನಿವಾರ ಎರಡು ದಿನಗಳ ಕಾಲ ಆಧಾರ ತಿದ್ದುಪಡಿ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10.30ರಿಂದಲೇ ಮೇಳ ಶುರುವಾಗಿತ್ತು. ಸುಮಾರು 100ಕ್ಕೂ ಅಧಿಕ ಜನರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ಯಾಗಲಿ ಸೇವಾ ಸಹಕಾರಿ ಸಂಘದ ನಿರ್ದೇಶಕ ವಿ.ಎಮ್.ಹೆಗಡೆ ಶಿಂಗು ವಹಿಸಿದ್ದರು. ಶಿರಸಿಯ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಿರಸಿ ದಕ್ಷಿಣದ ಅಂಚೆ ಉಪಾಧೀಕ್ಷಕ ಸುನೀಲ್ ಕುಮಾರ್ ವಿ, ಮಾರ್ಕೆಂಟಿಂಗ್‌ ಎಕ್ಸಿಕ್ಯೂಟಿವ್‌ ಗಳಾದ ಎಮ್.ಎಮ್.ಹೆಗಡೆ ಹಾಗೂ ಮಹೇಶ ಹೆಜ್ಜೇರಿ ಭಾಗವಹಿಸಿದ್ದರು. ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಕುಮಾರಿ ಪಾವನಿ ಹೆಗಡೆ ಮತ್ತಿಹಳ್ಳಿ ಪ್ರಾರ್ಥನೆ ಮಾಡಿದರು. ನಟರಾಜ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ರಾಜಾರಾಮ ಹೆಗಡೆ ವಂದನಾರ್ಪಣೆ ಸಲ್ಲಿಸಿದರು. ಮುಖ್ಯಕಾರ್ಯನಿರ್ವಾಹಕ ಸುಧಾಕರ ಹೆಗಡೆ, ಕಾನಸೂರ ಅಂಚೆ ಇಲಾಖೆಯ ಸಬ್ ಪೋಸ್ಟ್ ಮಾಸ್ಟರ್ ಜ್ಯೋತಿ ಬಾಳಿಗಾ ಹಾಗೂ ಅಂಚೆ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.

Leave a Reply

Your email address will not be published. Required fields are marked *