ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್ ರೈಲು ಕೆಲ ದಿನಗಳ ಕಾಲ ರದ್ದು
ಕಾರವಾರ: ನೈರುತ್ಯ ರೈಲ್ವೆಯು ಹಳಿ ನಿರ್ವಹಣೆ (ಟ್ಯಾಂಪಿಂಗ್) ಹಾಗೂ ಮೆಟೀರಿಯಲ್ ರೈಲು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶ್ರೀವಾಗಿಲು–ಯಡಕುಮಾರಿ ವಿಭಾಗದಲ್ಲಿ ಬ್ಲಾಕ್ ಕೈಗೊಳ್ಳುತ್ತಿರುವುದರಿಂದ 16515/16516 ಯಶವಂತಪುರ–ಕಾರವಾರ–ಯಶವಂತಪುರ ತ್ರೈವಾರಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಕೆಲ ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಿದೆ.
ರೈಲ್ವೆ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 16515 ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್ ಅಕ್ಟೋಬರ್ 5, 7, 9, 12, 14, 21, 23, 26, 28, 30 ಹಾಗೂ ನವೆಂಬರ್ 2, 2026 ರಂದು ಆರಂಭವಾಗಬೇಕಿದ್ದ ಪ್ರಯಾಣಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಅದೇ ರೀತಿ, ರೈಲು ಸಂಖ್ಯೆ 16516 ಕಾರವಾರ–ಯಶವಂತಪುರ ಎಕ್ಸ್‌ಪ್ರೆಸ್ ಅಕ್ಟೋಬರ್ 6, 8, 10, 13, 15, 22, 24, 27, 29, 31 ಹಾಗೂ ನವೆಂಬರ್ 3, 2026 ರಂದು ಆರಂಭವಾಗಬೇಕಿದ್ದ ಪ್ರಯಾಣಗಳನ್ನೂ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಈ ದಿನಾಂಕಗಳಲ್ಲಿ ಪ್ರಯಾಣಿಸಲು ಯೋಜನೆ ಮಾಡಿಕೊಂಡಿರುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಮರುಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಈ ತಾತ್ಕಾಲಿಕ ಅನಾನುಕೂಲತೆಗೆ ನೈರುತ್ಯ ರೈಲ್ವೆ ವಿಷಾದ ವ್ಯಕ್ತಪಡಿಸಿದೆ.
