21,682 ರೂ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಾಹನ ಸಮೇತ ವಶ
ಶಿರಸಿ:ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವೊಂದನ್ನು ಶಿರಸಿ ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಇಂದು ನಗರದಲ್ಲಿ ನಡೆದಿದೆ.
ಸೈಯದ್ ಎಂಬಾತ ತನ್ನ ಓಮಿನಿಯಲ್ಲಿ ಆರು ಕ್ವಿಂಟಲ್ 43 ಕೆಜಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಬನವಾಸಿ ಕಡೆಗೆ ಸಾಗಿಸುತ್ತಿರುವ ವೇಳೆಯಲ್ಲಿ ರಾಮನಬೈಲ್ ಕ್ರಾಸ್ ಎದುರು ಬನವಾಸಿ ರಸ್ತೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಅಕ್ಕಿಯ ಮೌಲ್ಯ 21,682 ರೂ ಎನ್ನಲಾಗಿದೆ. ಶಿರಸಿ ಆಹಾರ ಇಲಾಖೆ ಶಿರಸ್ತೆದಾರ್ ವೀಣಾ ರಾಮಪ್ಪ ಕಿವಡೇರ ಮಾರ್ಗದರ್ಶನದಲ್ಲಿ,ಆಹಾರ ನಿರೀಕ್ಷಕಿ ಕವಿತಾ ಪಾಟಣಕರ ದಾಳಿ ನಡೆಸಿದ್ದು ಗ್ರಾಮ ಆಡಳಿತ ಅಧಿಕಾರಿ ಪಲ್ಲವಿ, ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸದ್ಯ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
