ಯೆಸ್… ಅರಣ್ಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಪಾಲಿಗೆ ಉತ್ತರ ಕನ್ನಡ ಜಿಲ್ಲೆ ಹುಲ್ಲುಗಾವಲಿನಂತಾಗಿಬಿಟ್ಟಿದ್ಯಾ ಹೀಗೊಂದು ಅನುಮಾನ ಇದೀಗ ಮಾಡೋದಕ್ಕೆ ಶುರುವಾಗಿದೆ.

0
WhatsApp Image 2026-07-16 at 16.01.57

ಯೆಸ್… ಅರಣ್ಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಪಾಲಿಗೆ ಉತ್ತರ ಕನ್ನಡ ಜಿಲ್ಲೆ ಹುಲ್ಲುಗಾವಲಿನಂತಾಗಿಬಿಟ್ಟಿದ್ಯಾ ಹೀಗೊಂದು ಅನುಮಾನ ಇದೀಗ ಮಾಡೋದಕ್ಕೆ ಶುರುವಾಗಿದೆ. ಯಾಕಂದ್ರೆ ಹೇಳಿಕೇಳಿ ನಮ್ಮದು ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆ. ಸಹ್ಯಾದ್ರಿಯನ್ನೇ ಮೈಗೆ ಹೊದ್ದು ನಿಂತಿರುವ ನಮ್ಮ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವರು ಇರುವ ಕಾಡನ್ನು ಸರಿಯಾಗಿ ರಕ್ಷಣೆ ಮಾಡಿಕೊಂಡರೆ ಸಾಕು. ಆದರೆ ಇವರು ಕಾಡಿರುವ ಜಿಲ್ಲೆಯಲ್ಲಿಯೇ ಸಸಿಗಳನ್ನು ನೆಡಲು 4 ವರ್ಷದಲ್ಲಿ ಬರೋಬ್ಬರಿ 212 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾರೆ ಅಂದರೆ ನೀವು ನಂಬಲೇಬೇಕು.
ಹೌದು… ಇಂಥದೊಂದು ಅಚ್ಚರಿಕರ ಮಾಹಿತಿಯನ್ನು ಖುದ್ದು ಅರಣ್ಯ ಇಲಾಖೆಯ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರೇ ನೀಡಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಗಿಡ ನೆಡುವ ಕಾಮಗಾರಿಗಳ ಬಗ್ಗೆ 6 ಅಂಶಗಳ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಈ ಮಾಹಿತಿಯನ್ನು ನೀಡಲಾಗಿದೆ.

Leave a Reply

Your email address will not be published. Required fields are marked *